ಇಂಟರ್ಮಿಟೆಂಟ್ ಫಾಸ್ಟಿಂಗ್ ಬಗ್ಗೆ ನೈಜ ಸತ್ಯಗಳು ಮತ್ತು ನ್ಯಾಚುರೋಪತಿ ವಿಧಾನ
ನಮಸ್ತೆ ನಾನು ಡಾಕ್ಟರ್ ಅಪೂರ್ವ ಮುಕುಂದ್ ಪ್ರಾಣ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕೇಂದ್ರದಿಂದ ಇವತ್ತಿನ ವಿಡಿಯೋದಲ್ಲಿ ನಾವು ಇಂಟರ್ಮಿಟೆಂಟ್ ಫಾಸ್ಟಿಂಗ್ ಬಗ್ಗೆ ಮಾತಾಡೋಣ. ಇದು ಒಂದು ತುಂಬಾ ಟ್ರೆಂಡಿಂಗ್ ಡಯಟ್ ತುಂಬಾ ಸೆಲೆಬ್ರಿಟಿಸ್ ಆಗಿರಬಹುದು ವೇಟ್ ಲಾಸ್ ಗೆ ಸಜೆಸ್ಟ್ ಮಾಡುವಂತಹ ಡಯಟ್ ಆಗಿರಬಹುದು. ಸೋ ಜಿಮ್ ಅಲ್ಲಿ ಕೂಡ ಸಜೆಸ್ಟ್ ಮಾಡ್ತಿದ್ದಾರೆ ತುಂಬಾ ಜನಕ್ಕೆ ಸೋ ತುಂಬಾ ಡೌಟ್ ಇದೆ ಇದೆ ಇದರ ಬಗ್ಗೆ ಮೇಡಂ ಇದು ಮಾಡಬಹುದಾ ಇದು ನಮಗೆ ಸೇಫ್ ಅಥವಾ ನ್ಯಾಚುರೋಪತಿ ಈ ರೀತಿ ಡಯಟ್ ನ ಒಪ್ಪಿಕೊಳ್ಳುತ್ತಾ ಇದನ್ನ ನಾವು ಉಪವಾಸ ಅಂತ ನಿಜವಾಗ್ಲೂ ಕರೀಬಹುದಾ ಅಂತ ತುಂಬಾ ಜನ ಕೇಳ್ತಾರೆ.
ಸೋ ಇವತ್ತಿನ ವಿಡಿಯೋದಲ್ಲಿ ನಿಮಗೆ ಅದರದ್ದು ಎಲ್ಲಾ ರೀತಿಯ ಆನ್ಸರ್ಸ್ ನ ನಾನು ತಿಳಿಸ್ತೀನಿ ನ್ಯಾಚುರೋಪತಿ ಪ್ರಕಾರ ಯಾವ ರೀತಿ ಇಂಟರ್ಮಿಟೆಂಟ್ ಫಾಸ್ಟಿಂಗ್ ನೀವು ಮಾಡಬಹುದು ಅಂತ ಕೂಡ ನಿಮಗೆ ಹೇಳ್ತೀನಿ.
ಇಂಟರ್ಮಿಟೆಂಟ್ ಫಾಸ್ಟಿಂಗ್ ಎಂದರೇನು? ಮತ್ತು ಅದರ ವಿವಿಧ ಪ್ರಕಾರಗಳು
ಇಂಟರ್ಮಿಟೆಂಟ್ ಫಾಸ್ಟಿಂಗ್ ಅನ್ನುವಂತದ್ದು ಒಂದು ಸ್ಪೆಸಿಫಿಕ್ ಆಗಿ ಫೀಡಿಂಗ್ ಸೈಕಲ್ ಮತ್ತೆ ಒಂದು ಫಾಸ್ಟಿಂಗ್ ಸೈಕಲ್ ಅಲ್ಲಿ ಮಾಡುವಂತಹ ಕ್ರಮ ಇದು ಒಂದು ನಾವು ಫಾಸ್ಟಿಂಗ್ ಗಿನ್ನ ಉಪವಾಸ ಅಂತ ಹೇಳೋಕಿನ ಇದು ಒಂದು ಡಯಟ್ ಅಂತ ನಾವು ಹೇಳಬಹುದು ಇದು ಒಂದು ತಿನ್ನುವ ರೀತಿ ಅಂದ್ರೆ ದಿನದಲ್ಲಿ ಎಂಟು ಗಂಟೆಯ ಕಾಲ ಅವರು ತಿಂತಾರೆ 16 ಗಂಟೆ ಕಾಲ ಅವರು ಫಾಸ್ಟಿಂಗ್ ಮಾಡ್ತಾರೆ ಈ ರೀತಿ ಮಾಡುವಂತಹ ಡಯಟ್ ಕಾಮನ್ ಆಗಿ ಇದು 8 ಟು 16 ರೇಶಿಯೋ ಅಲ್ಲಿ ಮಾಡ್ತಾರೆ.

ಇನ್ನು ಕೆಲವೊಬ್ಬರು ತುಂಬಾ ಸ್ಟ್ರಿಕ್ಟ್ ಆಗಿ ಮಾಡುವಂತವರು ಬರಿ ಆರು ಗಂಟೆ ಕಾಲದಲ್ಲಿ ತಿನ್ನೋದು ಉಳಿದ 18 ಗಂಟೆ ಕಾಲ ಫಾಸ್ಟಿಂಗ್ ಮಾಡ್ತಾರೆ ಅಂದ್ರೆ ಆ 18 ಗಂಟೆ ಕಾಲ ದಲ್ಲಿ ಏನು ತಿನ್ನೋದಿಲ್ಲ ಈ ರೀತಿ ಮಾಡುವ ಒಂದು ಕ್ರಮ ಇದೆ ಇನ್ನು ಕೆಲವೊಬ್ಬರು ವಾರದಲ್ಲಿ ಐದು ದಿನ ನಾರ್ಮಲ್ ಆಗಿ ತಿಂದುಬಿಟ್ಟು ಎರಡು ದಿನ ಕಂಪ್ಲೀಟ್ ಆಗಿ ಫಾಸ್ಟಿಂಗ್ ಮಾಡ್ತಾರೆ ಸೋ ಈ ರೀತಿ ಮಾಡುವರು ಕೂಡ ಇದನ್ನ ಇಂಟರ್ಮಿಟೆಂಟ್ ಫಾಸ್ಟಿಂಗ್ ಅಂತ ಕರೀತಾರೆ.
ಬಯೋಲಾಜಿಕಲ್ ಕ್ಲಾಕ್ (ಸರ್ಕಾಡಿಯನ್ ರಿದಮ್) ಮತ್ತು ಜೀರ್ಣಶಕ್ತಿ
ಸೋ ನಾವು ಈಗ ಏನು ಮಾಡಬೇಕು ಅಂತ ಹೇಳಿದ್ರೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಿದಾಗ ಸ್ಪೆಸಿಫಿಕ್ ಆಗಿ ನೀವು ನೆನಪಿಟ್ಟುಕೊಳ್ಳಬೇಕಾಗಿರೋದು ಏನು ಅಂದ್ರೆ ಇದು ಮಾಡೋದು ನಮ್ಮ ದೇಹದ ಬಯೋಲಾಜಿಕಲ್ ಕ್ಲಾಕ್ ಅಥವಾ ಸರ್ಕಾಡಿಯನ್ ರಿದಮ್ ಅಂತ ಹೇಳ್ತಿವಿ ನಾವು ಹೇಗೆ ವಾಚ್ ಇರುತ್ತೋ ಗಡಿಯಾರ ಇರುತ್ತೋ ಅದಕ್ಕೊಂದು ಟೈಮ್ ತೋರಿಸುತ್ತಲ್ವಾ ಅದೇ ರೀತಿ ನಮ್ಮ ಬಾಡಿಗೂ ಕೂಡ ಒಂದು ಕ್ಲಾಕ್ ಇರುತ್ತೆ. ಈ ಕ್ಲಾಕ್ ಪ್ರಕಾರ ಒಂದು ದಿನದಲ್ಲಿ ಪರ್ಟಿಕ್ಯುಲರ್ ಟೈಮ್ ಅಲ್ಲಿ ಜೀರ್ಣಶಕ್ತಿ ನಮ್ದು ಜಾಸ್ತಿ ಇರುತ್ತೆ ಇನ್ನು ಕೆಲವು ಸಮಯದಲ್ಲಿ ನಮ್ಮ ಜೀರ್ಣಶಕ್ತಿ ಕಡಿಮೆ ಇರುತ್ತೆ.
ಸೋ ಇದನ್ನ ನಾವು ತುಂಬಾ ಗಮನಿಸಿಬಿಟ್ಟು ಅದರ ಜೊತೆಗೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಿದ್ರೆ ನಮಗೆ ಒಳ್ಳೆ ರಿಸಲ್ಟ್ ಸಿಗುತ್ತೆ ಈಗ ನಮ್ಮ ದೇಹದಲ್ಲಿ ಜೀರ್ಣ ಶಕ್ತಿ ಯಾವಾಗ ಕಡಿಮೆ ಇದೆಯೋ ಯಾವಾಗ ನಮ್ಮ ಹಾರ್ಮೋನ್ಸ್ ಇನ್ಸುಲಿನ್ ರಿಲೀಸ್ ಆಗೋದು ಕಡಿಮೆ ಇದೆಯೋ ಆ ಸಮಯದಲ್ಲಿ ನಾವು ತಿನ್ನಕ್ಕೆ ಹೋದ್ರೆ ದೇಹ ಅದನ್ನ ಜೀರ್ಣ ಮಾಡಿಕೊಳ್ಳುವುದಿಲ್ಲ.
ಸೊ ಅದಕ್ಕೆ ನಿಮಗೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಿದ್ರು ಕೂಡ ಅದರಿಂದ ಒಳ್ಳೆ ಬೆನಿಫಿಟ್ ಸಿಗೋದಿಲ್ಲ ಅದು ಮಾಡಿದ್ರು ಕೂಡ ನಿಮಗೆ ವೇಟ್ ಲಾಸ್ ಆಗುತ್ತೆ ಇನ್ನು ಕೆಲವು ರಿಸರ್ಚ್ ಪ್ರಕಾರ ಇಂಟರ್ಮಿಟೆಂಟ್ ಫಾಸ್ಟಿಂಗ್ ಇಂದ ಹಾರ್ಮೋನ್ ಚೇಂಜಸ್ ಆಗ್ತಿದೆ ಮಹಿಳೆಯರಲ್ಲಿ ಪಿರಿಯಡ್ಸ್ ಸಮಸ್ಯೆ ಬರ್ತಿದೆ ಅಂತ ಕೂಡ ಕಾಣಿಸಿ ಬಂದಿದೆ ಅದೆಲ್ಲ ಯಾಕೆ ಆಗ್ತಾ ಇರೋದು ಅಂತ ಹೇಳಿದ್ರೆ ನಿಮ್ಮ ಬಯೋಲಾಜಿಕಲ್ ಕ್ಲಾಕ್ ಪ್ರಕಾರ ನೀವು ತಿಂದೆ ಹೋಗಿದ್ದಕ್ಕೆ.
ನಮ್ಮ ಪೂರ್ವಜರ ಆಹಾರ ಪದ್ಧತಿ ಮತ್ತು ನೈಸರ್ಗಿಕ ಉಪವಾಸ
ಈ ಇಂಟರ್ಮಿಟೆಂಟ್ ಫಾಸ್ಟಿಂಗ್ ಈ ಈಗ ಟ್ರೆಂಡ್ ಅಲ್ಲಿ ಇದೆ ಆದರೆ ನಮ್ಮ ಪೂರ್ವಜರಾಗಿರಬಹುದು ಅಥವಾ ನಮ್ಮ ನ್ಯಾಚುರೋಪತಿ ಆಯುರ್ವೇದದಲ್ಲಿ ಎಷ್ಟೋ ವರ್ಷಗಳ ಹಿಂದೆ ಇದೇ ರೀತಿ ತಿನ್ನುವ ಕ್ರಮವನ್ನು ಅವರು ಹೇಳಿದ್ದಾರೆ ಎಲ್ಲಾ ಸ್ಟಡೀಸ್ ಅಲ್ಲೂ ಎಲ್ಲಾ ಸಿಸ್ಟಮ್ ಆಫ್ ಮೆಡಿಸಿನ್ಸ್ ಅಲ್ಲೂ ಪೂರ್ವಜರು ನಮಗೆ ಹೇಳಿದ್ದು ಏನು ಅಂತ ಹೇಳಿದ್ರೆ ದಿನಕ್ಕೆ ಎರಡು ಬಾರಿ ಊಟ ಮಾಡುವಂತದ್ದು.
ಆಮೇಲೆ ನೀವು ನೋಡಿರಬಹುದು ನಿಮ್ಮ ಮನೆಯಲ್ಲಿ ಅಜ್ಜ ಅಜ್ಜಿ ಇದ್ರೆ ಅವರು ತಿನ್ನೋದು ಎಷ್ಟು ಗಂಟೆಗೆ ಅವರು ಬೆಳಿಗ್ಗೆ ಎದ್ದು ಇಮ್ಮಿಡಿಯೇಟ್ ಆಗಿ ಏನು ತಿನ್ನಲ್ಲ ಅವರು ಪೂಜೆ ಎಲ್ಲ ಮುಗಿಸಿಕೊಂಡು ಒಂದು 10 11 ಗಂಟೆ ಕಾಲ ಆ ಟೈಮಲ್ಲಿ ಊಟ ಮಾಡ್ತಾರೆ ಬ್ರೇಕ್ಫಾಸ್ಟ್ ನ ಮಾಡೋದಿಲ್ಲ ಊಟನೆ ಮಾಡ್ಬಿಡ್ತಾರೆ ಊಟನ ಮಾಡ್ಬಿಟ್ಟು ಆಮೇಲೆ ಕೆಲಸ ಎಲ್ಲ ಮುಗಿಸಿಬಿಟ್ಟು ಅವರು ಸಾಯಂಕಾಲ ತಗೊಂಡ್ರೆ ಏನಾದ್ರು ಒಂದು ಮಧ್ಯಾಹ್ನ ಅಷ್ಟೊತ್ತಿಗೆ ಮೂರು ಗಂಟೆ ಅಷ್ಟೊತ್ತಿಗೆ ಏನಾದ್ರು ಸ್ನಾಕ್ ತಗೋಬಹುದು ಒಂದು ಹಣ್ಣು ಒಂದು ಸ್ವಲ್ಪ ಸಲಾಡ್ ಇತರ ಏನಾದ್ರು ತಗೋಬಹುದು ಮತ್ತೆ 6:00 ಗಂಟೆ 6:30 ಅಷ್ಟೊತ್ತಿಗೆ ಅವರು ಊಟನ ಮುಗಿಸಿಬಿಡ್ತಾರೆ.
ಸೋ ಇದು ಒಂದು ಪರ್ಫೆಕ್ಟ್ ಇಂಟರ್ಮಿಟೆಂಟ್ ಫಾಸ್ಟಿಂಗ್ ಎಕ್ಸಾಂಪಲ್ ಇದರಲ್ಲಿ ಆಟೋಮ್ಯಾಟಿಕ್ ಆಗಿ ನೀವು ಒಂದು ಎಂಟರಿಂದ 10 ಗಂಟೆ ಒಳಗಡೆ ಎಲ್ಲಾ ತಿಂದು ಬಿಡ್ತೀರಾ ನಿಮ್ಮ ಮೀಲ್ಸ್ ನ ಕಂಪ್ಲೀಟ್ ಮಾಡ್ಬಿಡ್ತೀರಾ ಆಮೇಲೆ ಇದು ಸರ್ಕಾಡಿಯನ್ ರಿದಮ್ ನಮ್ಮ ಬಯೋಲಾಜಿಕಲ್ ಕ್ಲಾಕ್ ಜೊತೆ ತುಂಬಾ ಇದು ಸಿಮಿಲರ್ ಆಗಿರುತ್ತೆ ಯಾಕಂದ್ರೆ ಏಳು ಗಂಟೆ ಆದ್ಮೇಲೆ ನಮ್ಮ ಬಾಡಿ ಇನ್ಸುಲಿನ್ ನ ಪ್ರೊಡ್ಯೂಸ್ ಮಾಡೋದು ಕಡಿಮೆ ಮಾಡುತ್ತೆ ನಮ್ಮ ಜೀರ್ಣಶಕ್ತಿ ತುಂಬಾ ಕಡಿಮೆ ಆಗ್ತಾ ಹೋಗುತ್ತೆ.
ಸೋ ಈ 7:00 ಗಂಟೆ ಒಳಗಡೆನೇ ನೀವು ಊಟ ಮಾಡ್ಬಿಟ್ರೆ ನಿಮ್ಮ ಜೀರ್ಣ ಚೆನ್ನಾಗಿ ಆಗುತ್ತೆ ನಿಮಗೆ ಒಂದು ಒಳ್ಳೆ ಫಾಸ್ಟಿಂಗ್ ಪಿರಿಯಡ್ ಕೂಡ ಸಿಗುತ್ತೆ ಸಾಯಂಕಾಲ 7:00 ಗಂಟೆಯಿಂದ ನೆಕ್ಸ್ಟ್ ಡೇ 7:00 ಗಂಟೆ ಅಥವಾ ಒಂಬತ್ತು ಗಂಟೆಗೆ ನೀವು ಫಸ್ಟ್ ಮೀಲ್ ತಗೊಂಡ್ರೆ ಆರಾಮಾಗಿ ಒಂದು 14 ಗಂಟೆ ಕಾಲ ನಿಮಗೆ ಫಾಸ್ಟಿಂಗ್ ಪಿರಿಯಡ್ ಸಿಗುತ್ತೆ ಅದು ಆಟೋಮ್ಯಾಟಿಕ್ ಆಗಿ ಆಗ್ಬಿಡುತ್ತೆ ನೀವು ಸ್ಟ್ರಿಕ್ಟ್ ಆಗಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಬೇಕು ಅಂತ ಏನು ಇಲ್ಲ ನೀವು ನ್ಯಾಚುರಲ್ ಆಗಿ ಈ ರೀತಿ ತಿಂತಾ ಬಂದ್ರೆ ನಿಮಗೆ ತುಂಬಾ ಎಫೆಕ್ಟಿವ್ ಆಗಿ ರಿಸಲ್ಟ್ಸ್ ಕಾಣ್ಸುತ್ತೆ.
ಅತಿಯಾದ ಕಟ್ಟುನಿಟ್ಟಿನ ಉಪವಾಸದಿಂದಾಗುವ ಅಡ್ಡಪರಿಣಾಮಗಳು
ಇನ್ನೊಂದು ನೀವು ಏನು ನೆನಪಿಟ್ಟುಕೊಳ್ಳಬೇಕು ಅಂದ್ರೆ ನಿಮ್ಮ ಸ್ಟ್ರಿಕ್ಟ್ ಆಗಿ ತುಂಬಾ ಬೇಗ ವೇಟ್ ಲಾಸ್ ಆಗ್ಬೇಕು ಅಂದ್ರೆ ಬರಿ ಆರು ಗಂಟೆ ಕಾಲದಲ್ಲಿ ನಾನು ತಿಂತೀನಿ ಬರಿ ಫೋರ್ ಅವರ್ಸ್ ಒಳಗಡೆ ವಿಂಡೋ ಪಿರಿಯಡ್ ಅಲ್ಲಿ ನಾನು ತಿಂತೀನಿ ಉಳಿದ ಫುಲ್ ಫುಲ್ ಟೈಮ್ ಫಾಸ್ಟಿಂಗ್ ಮಾಡ್ತೀನಿ ಅಂತ ಮಾಡೋಕೆ ಹೋದ್ರೆ ನಮ್ಮ ದೇಹಕ್ಕೆ ಇಷ್ಟು ಗ್ರಾಂ ಕಾರ್ಬೋಹೈಡ್ರೇಟ್ ಇಷ್ಟು ಗ್ರಾಂ ಪ್ರೋಟೀನ್ ಮತ್ತೆ ಕೆಲವೊಂದು ನ್ಯೂಟ್ರಿಯೆಂಟ್ಸ್ ಬೇಕೇ ಬೇಕು ಪ್ರತಿದಿನ ನಾರ್ಮಲ್ ಆಗಿ ಕೆಲಸ ಮಾಡೋಕೆ ಅದೆಲ್ಲ ನ್ಯೂಟ್ರಿಯೆಂಟ್ಸ್ ಬೇಕಾಗಿರುತ್ತೆ.
ಬರಿ ನಾಲ್ಕು ಗಂಟೆಗಳಲ್ಲಿ ನೀವು ಒಂದೇ ಒಂದು ಹೊತ್ತು ಊಟ ಮಾಡಿ ಅಷ್ಟು ನ್ಯೂಟ್ರಿಯೆಂಟ್ಸ್ ಒಂದೇ ಹೊತ್ತಿನ ಊಟದಲ್ಲಿ ತಗೊಳ್ಳೋದು ಸಾಧ್ಯ ಖಂಡಿತವಾಗ್ಲೂ ಆಗಲ್ಲ ಅದರಿಂದ ನಿಮಗೆ ನ್ಯೂಟ್ರಿಷನಲ್ ಡೆಫಿಷಿಯನ್ಸಿಸ್ ಬರ್ತಾ ಹೋಗುತ್ತೆ ಅದಾದ್ಮೇಲೆ ನಿಮಗೆ ತುಂಬಾ ಪ್ರಾಬ್ಲಮ್ಸ್ ಕ್ರಿಯೇಟ್ ಆಗ್ತಾ ಹೋಗುತ್ತೆ ಲಾಂಗ್ ಟರ್ಮ್ ಅಲ್ಲಿ ನಿಮಗೆ ಪ್ರಾಬ್ಲಮ್ ಕ್ರಿಯೇಟ್ ಆಗುತ್ತೆ ಸೊ ಅದಕ್ಕಾಗಿ ನೀವು ನೆನಪಿಟ್ಟುಕೊಳ್ಳಬೇಕು ಆರಾಮಾಗಿ ಒಂದು ಎಂಟರಿಂದ ಹತ್ತು ಗಂಟೆ ಕಾಲದ ಒಳಗಡೆ ನೀವು ನಿಮ್ಮ ಫುಡ್ ನ ಫಿಟ್ ಮಾಡಿ ವೀಕ್ಲಿ ನೀವು ದಿನಕ್ಕೆ ಎರಡು ಮೀಲ್ಸ್ ತಗೊಳ್ಳಿ ಆಮೇಲೆ ಅದನ್ನ ಮಾಡೋರೇಟ್ ಆಗಿ ರೆಗ್ಯುಲರ್ ಆಗಿ ಬ್ಯಾಲೆನ್ಸ್ಡ್ ಡಯಟ್ ತಗೊಳ್ಳೋದು ಕೂಡ ತುಂಬಾ ಇಂಪಾರ್ಟೆಂಟ್.
ಮಾಡರ್ನ್ ಇಂಟರ್ಮಿಟೆಂಟ್ ಫಾಸ್ಟಿಂಗ್‌ನಲ್ಲಿ ಮಾಡುವ ಸಾಮಾನ್ಯ ತಪ್ಪುಗಳು
ಮಾಡರ್ನ್ ಆಗಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡೋದ್ರಲ್ಲಿ ಏನೆಲ್ಲಾ ಮಿಸ್ಟೇಕ್ಸ್ ನೀವು ಮಾಡ್ತಾ ಇರಬಹುದು ಅಂತ ಹೇಳ್ತೀನಿ ನಿಮ್ಮ ಡ್ಯೂಟಿ ಶೆಡ್ಯೂಲ್ ಶುರು ಆಗೋದಕ್ಕೆ ಸೋ ಅದಕ್ಕೆ ನೀವು ಏನು ಮಾಡ್ತೀರಾ ನಿಮಗೆ 11:00 ಗಂಟೆಗೆ ಊಟ ಮಾಡಕ್ಕೆ ಆಗೋದಿಲ್ಲ ನೀವು ಡೈರೆಕ್ಟ್ ಆಗಿ ಎರಡು ಗಂಟೆಗೆ ಒಂದು ಫಸ್ಟ್ ಮೀಲ್ ತಗೋತೀರಾ ಸೋ ಬೆಳಿಗ್ಗೆಯಿಂದ ಎರಡು ಗಂಟೆವರೆಗೂ ನೀವು ಏನು ತಿಂದಿರಲ್ಲ ಸೋ ಆ ಹಸಿವನ್ನ ನೀವು ತಡೆಗಟ್ಟಕ್ಕೆ ಏನ್ ಮಾಡ್ತೀರಾ ಗ್ರೀನ್ ಟೀ ಕುಡಿತಾ ಇರ್ತೀರಾ ಬ್ಲಾಕ್ ಟೀ ಕುಡಿತೀರಾ ಇದೆಲ್ಲ ಮಾಡೋದ್ರಿಂದ ನಿಮಗೆ ಅಸಿಡಿಟಿ ಲೆವೆಲ್ಸ್ ಜಾಸ್ತಿ ಆಗುತ್ತೆ ಆಮೇಲೆ ಜೀರ್ಣ ಶಕ್ತಿ ಆಲ್ರೆಡಿ ನಿಮಗೆ ಜಾಸ್ತಿ ಆಗೋಗಿರುತ್ತೆ ಸೋ ಆಸಿಡ್ ಪ್ರೊಡಕ್ಷನ್ ತುಂಬಾ ಜಾಸ್ತಿ ಇರುತ್ತೆ ಸೋ ಈ ರೀತಿ ಮಾಡೋದ್ರಿಂದ ನಿಮಗೆ ನಿಮಗೆ ಹಾನಿ ಉಂಟಾಗುತ್ತೆ.
ಇನ್ನೊಂದು ಏನಂದ್ರೆ ನೀವು ರಾತ್ರಿ ಎಂಟು ಗಂಟೆವರೆಗೂ ಮನೆಗೆ ಬರಲ್ಲ ಸೋ ಏನ್ ಮಾಡ್ತೀರಾ ನೀವು ಅದಾದ್ಮೇಲೆ ಊಟ ಮಾಡ್ತೀರಾ ಅವಾಗ ನಿಮಗೆ ಈ ಇಂಟರ್ಮಿಟೆಂಟ್ ಫಾಸ್ಟಿಂಗ್ ಒಳ್ಳೆ ಬೆನಿಫಿಟ್ ಕೊಡಲ್ಲ ಸೋ ಬೆಸ್ಟ್ ಆಗಿ ನಿಮಗೆ ಶೆಡ್ಯೂಲ್ ಪರ್ಮಿಟ್ ಮಾಡ್ತಾ ಇಲ್ಲ ಅಂದ್ರೆ ಪ್ರತಿಯೊಬ್ಬರು ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡೋ ಅವಶ್ಯಕತೆ ಇಲ್ಲ ನಿಮ್ಮ ಶೆಡ್ಯೂಲ್ ಪರ್ಮಿಟ್ ಮಾಡ್ತಾ ಇಲ್ಲ ಅಂದ್ರೆ ನೀವೇನು ಮಾಡಿ ಅಟ್ಲೀಸ್ಟ್ ಮಿನಿಮಮ್ 12 ಅವರ್ಸ್ ಫಾಸ್ಟಿಂಗ್ ಮಾಡಿ ಅಂದ್ರೆ ರಾತ್ರಿ ಎಂಟು ಗಂಟೆಗೆ ನೀವು ಊಟ ಮಾಡಿದ್ರೆ ನೆಕ್ಸ್ಟ್ ಡೇ ಎಂಟು ಗಂಟೆವರೆಗೂ ಏನು ತಿಂದಿಲ್ಲ ಅಂದ್ರು ಕೂಡ 12 ಅವರ್ಸ್ ಫಾಸ್ಟಿಂಗ್ ಪಿರಿಯಡ್ ನಿಮಗೆ ಸಿಗುತ್ತೆ ಸೋ ಅದರ ಬೆನಿಫಿಟ್ ನಿಮಗೆ ಖಂಡಿತ ಸಿಗುತ್ತೆ
ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡುವ ಸರಿಯಾದ ವಿಧಾನ ಮತ್ತು ನಿಯಮಗಳು
ಸೋ ಇಂಟರ್ಮಿಟೆಂಟ್ ಫಾಸ್ಟಿಂಗ್ ನೀವು ಈ ರೀತಿ ಮಾಡಬೇಕು ಆಮೇಲೆ ಬೆಸ್ಟ್ ರಿಸಲ್ಟ್ಸ್ ಬರೋಕೆ ವಾರಕ್ಕೆ ಒಂದು ದಿನ ಫಾಸ್ಟಿಂಗ್ ಮಾಡಿದ್ರೆ ತುಂಬಾ ಬೆನಿಫಿಷಿಯಲ್ ಆದ್ರೆ ಬೇರೆ ದಿನ ಊಟ ಬೇಗ ಮಾಡಿ ಆದಷ್ಟು ಬೇಗ ಮಾಡಿ ಏಳು ಗಂಟೆ ಅಷ್ಟೊತ್ತಿಗೆ ಊಟ ಮಾಡಿದ್ರೆ ತುಂಬಾ ಒಳ್ಳೆಯದು ಇಲ್ಲ ಅಂತ ಹೇಳಿದ್ರೆ ನೀವು ಏನು ಮಾಡಬಹುದು ವಾರಕ್ಕೆ ಒಂದು ದಿನ ಉಪವಾಸ ಮಾಡಿ.
ಈ ಉಪವಾಸದಲ್ಲಿ ಆದಷ್ಟು ಬರಿ ಹಣ್ಣು ಅಥವಾ ನೀರು ನೀರು ಇದನ್ನ ಸೇವಿಸ್ತಾ ಇರಿ ಫುಡ್ ನ ಕಂಪ್ಲೀಟ್ ಆಗಿ ಕುಕ್ಡ್ ಫುಡ್ ಅನ್ನ ಅವಾಯ್ಡ್ ಮಾಡಿ ವೆಜಿಟೇಬಲ್ಸ್ ಬೇಕಿದ್ರೆ ಕುಕ್ಡ್ ವೆಜಿಟೇಬಲ್ಸ್ ತಗೋಬಹುದು ಬಟ್ ಈ ಧಾನ್ಯಗಳನ್ನ ಕಂಪ್ಲೀಟ್ ಆಗಿ ಅವಾಯ್ಡ್ ಮಾಡಿ ಫಾಸ್ಟಿಂಗ್ ನ ಮಾಡಬಹುದು ಸೋ ಈ ರೀತಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಕ್ರಮವನ್ನು ಪಾಲಿಸಿದರೆ ಇದರಿಂದ ತುಂಬಾ ಬೆನಿಫಿಟ್ಸ್ ಇದೆ.
ಸ್ಪೆಸಿಫಿಕ್ ಆಗಿ ಯಾರಿಗೆ ವೇಟ್ ಲಾಸ್ ಮಾಡಕ್ಕೆ ಇದಿದೆಯೋ ಯಾರು ಡಯಾಬಿಟಿಸ್ ಇರೋವರು ಆಗಿರಬಹುದು ಪಿಸಿಓಡಿ ಆಗಿರಬಹುದು ಇದೆಲ್ಲದಕ್ಕೂ ಈ ರೀತಿ ಇಂಟರ್ಮಿಟೆಂಟ್ ಫಾಸ್ಟಿಂಗ್ ನಮ್ಮ ಬಾಡಿಯ ಸರ್ಕಾಡಿಯನ್ ರಿದಮ್ ಜೊತೆಗೆ ಮಾಡೋದ್ರಿಂದ ತುಂಬಾ ಒಳ್ಳೆ ರಿಸಲ್ಟ್ಸ್ ನಿಮಗೆ ಕಾಣ್ಸುತ್ತೆ.
ಮುಕ್ತಾಯ
ಇದನ್ನ ಪ್ರಾಕ್ಟೀಸ್ ಮಾಡಿ ಇದು ನಿಮ್ಮ ಡಯಟ್ ತರ ನಾಲ್ಕು ದಿನ ಹತ್ತು ದಿನ ಮಾಡೋಕೆ ಹೋಗ್ಬೇಡಿ ಇದು ನಿಮ್ಮ ಜೀವನ ಶೈಲಿನೇ ಆಗ್ಬಿಡಬೇಕು ಇದೇ ರೀತಿ ರೂಟೀನ್ ಆಗಿ ನೀವು ಪ್ರಾಕ್ಟೀಸ್ ಮಾಡೋಕೆ ಆದ್ರೆ ಮಾತ್ರ ಈ ರೀತಿ ಡಯಟ್ ನ ನೀವು ಸ್ಟಾರ್ಟ್ ಮಾಡಿ ಧನ್ಯವಾದ
Comments (0)
No comments yet. Be the first to comment!