Arogya Bhagya Kannada

Kudalu Uduruvike Parihara-ಕೂದಲು ಮತ್ತೆ ಬೆಳೆಯಲು 2 Super ಮನೆಮದ್ದುಗಳು

singlepost__thumbnail post

ಇಂದಿನ ಸಂಚಿಕೆಯಲ್ಲಿ, Kudalu Uduruvike Parihara ತಲೆಯಲ್ಲಿರುವ ಕೂದಲು ಬೆಳಗ್ಗೆ ಆಗುವುದು, ಮತ್ತು ತಲೆಯಲ್ಲಿ ಹೊಟ್ಟು ಆಗುವುದು ತಲೆ ಕೂದಲು ಉದುರುವ ಸಮಸ್ಯೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೋಡೋಣ.

ನಮ್ಮ ಸೌಂದರ್ಯಕ್ಕೆ ಮುಖ ಎಷ್ಟು ಅಂದವಾಗಿ ಕಾಣಿಸುತ್ತದೆಯೋ, ತಕ್ಕ ಹಾಗೆ ನಮ್ಮ ಕೂದಲು ಕೂಡ ಅಷ್ಟೇ ಅಂದವಾಗಿ ಕಾಣಿಸುತ್ತವೆ. ಆಗ ತುಂಬಾ ಜನರಲ್ಲಿ Attraction ಎನ್ನುವುದು ಇರುತ್ತದೆ. ಕೂದಲು ಉದುರುವ ಸಮಸ್ಯೆ ಬೋಳುತಲೇ, ಬಿಳಿ ಕೂದಲಿನ ಸಮಸ್ಯೆ ಇರುವವರಿಗೆ ತುಂಬಾ ಮಾನಸಿಕ ಚಿಂತೆಗಳು ಕಾಡುತ್ತವೆ.

ತಲೆಯಲ್ಲಿರುವ ಎಲ್ಲಾ ಕೂದಲುಗಳು ಉದುರುತ್ತವೆ ಅಲ್ಲ, ಎಂದು ಅವರಿಗೆ ತುಂಬಾ ಚಿಂತೆ ಆಗುತ್ತದೆ. ಇಂತಹ ಸಮಸ್ಯೆ ಇರುವವರಿಗೆ ನಾವು ಇಂದು ಒಂದು Remedy ಯನ್ನು ಹೇಳುತ್ತೇವೆ.

ನಿಮಗೆ ನೀವೇ ಮಾಡಿಕೊಳ್ಳುವಂತಹ Remedy ಇದು. ನೀವು ಆಸ್ಪತ್ರೆಗೆ ಹೋಗುವುದಾಗಲಿ ಮೆಡಿಕಲ್ ಸ್ಟೋರ್ ಗೆ ಹೋಗುವುದಾಗಲಿ ಯಾವ ಅವಶ್ಯಕತೆ ಇರುವುದಿಲ್ಲ.

ನಿಮ್ಮ ಮನೆಯಲ್ಲಿಯೇ ಇರುವಂತಹ ವಸ್ತುಗಳಿಂದ ತಯಾರಿಸಿ ಅದನ್ನು ಯಾವ ರೀತಿ ಉಪಯೋಗ ಮಾಡಿಕೊಳ್ಳಬಹುದು? ಎಂಬುದನ್ನು ನಾವು ತಿಳಿದುಕೊಳ್ಳೋಣ.

Kudalu Uduruvike Parihara / ಕಾರಣಗಳು

ತಲೆ ಕೂದಲು ಉದುರುವ ಸಮಸ್ಯೆ, ತಲೆಯಲ್ಲಿ ಹೊಟ್ಟು ಆಗುವ ಸಮಸ್ಯೆ, ತಲೆ ಕೂದಲು ಬಿಳಿಯಾಗುವ ಸಮಸ್ಯೆ, Kudalu Uduruvike Parihara / ಈ ಎಲ್ಲ ಸಮಸ್ಯೆಗಳಿಗೆ ಮುಖ್ಯ ಕಾರಣವೇನು ಎಂದರೆ? ದೇಹದಲ್ಲಿ ಪಿತಾಂಶ ಹೆಚ್ಚಿಗೆ ಆಗುವುದರಿಂದ ಈ ಎಲ್ಲಾ ಸಮಸ್ಯೆಗಳು ಬರುತ್ತವೆ.

Excess Overheat ಆಗಿ ಅಂದರೆ ಪಿತ್ತ ಹುಳಿ ಹುಳಿ ತೇಗು ಬರುವುದು, ಪದೇ ಪದೇ ತೇಗು ಬರುವುದು, ತಲೆ ಸುತ್ತು ಬರುವುದು, ಇಂತಹ ಎಲ್ಲಾ ಸಮಸ್ಯೆಗಳು ಇರುವವರು ವಾರಕ್ಕೆ ಒಂದು ಸಲ ತಲೆಗೆ ಎಣ್ಣೆ ಹಚ್ಚುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಹೆಣ್ಣುಮಕ್ಕಳು ತಲೆಗೆ ಕೊಬ್ಬರಿ ಎಣ್ಣೆಯನ್ನು ಬಳಸಬೇಕು. ಗಂಡು ಮಕ್ಕಳಾದರೆ, ತಲೆಗೆ ಹರಳೆಣ್ಣೆಯನ್ನು ಬಳಸಬೇಕು. ಈ ರೀತಿ ಕೆಲವು ಸಮಸ್ಯೆಗಳಿಗೆ ನೀವು ಅದಕ್ಕೆ ತಕ್ಕ ಹಾಗಿರುವ ಎಣ್ಣೆಗಳನ್ನು ಬಳಸಿಕೊಳ್ಳಬಹುದು.

Kudalu Uduruvike Parihara / ಮನೆ ಮದ್ದು

ಇಂದಿನ ದಿನಗಳಲ್ಲಿ ನಮಗೆ ಫಾರಂ ಕರಿಬೇವು ಸೊಪ್ಪು ಹೆಚ್ಚು ಸಿಗುತ್ತದೆ. ಒಂದು ಹಿಡಿಯಷ್ಟು ನಾಟಿ ಕರಿಬೇವು ಸೊಪ್ಪನ್ನು ತೆಗೆದುಕೊಳ್ಳಿ. ಇದರಲ್ಲಿ ಎಣ್ಣೆ ಎಷ್ಟು ಹಾಕಿ ಬಳಸುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ.

ನೀವು ಅರ್ಧ ಲೀಟರ್ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡರೆ, ಅರ್ಧ ಕೆಜಿ ನಾಟಿ ಕರಿ ಬೇವು ಸೊಪ್ಪನ್ನು ತೆಗೆದುಕೊಳ್ಳಬೇಕು. ನಾವು ಮನೆಗಳಲ್ಲಿ ಉಪಯೋಗ ಮಾಡುವಂತಹ ಕರಿಬೇವು ಸೊಪ್ಪನ್ನು ತೆಗೆದುಕೊಂಡರೆ ತುಂಬಾ ಉತ್ತಮ.

ಏಕೆಂದರೆ?ನಾಟಿ ಕರಬೇವು ಸೊಪ್ಪನ್ನು ತೆಗೆದುಕೊಂಡರೆ, ಅದರಲ್ಲಿ ಇರುವಂತಹ Iron Content ಆಗಿರಬಹುದು, ಅದರಲ್ಲಿ ಇರುವಂತಹ ಪ್ರತಿಯೊಂದು Vitamins ಆ ಎಣ್ಣೆಯಲ್ಲಿ ಸೇರಿದಾಗ ತಲೆಯಲ್ಲಿರುವಂತಹ Kudalu Uduruvike Parihara / ಸಮಸ್ಯೆಗಳು ದೂರವಾಗುತ್ತವೆ.

ಆದ್ದರಿಂದ ನಾಟಿ ಕರಿಬೇವಿನ ಸೊಪ್ಪು ಒಂದು ಅರ್ಧ ಕೆಜಿ ತೆಗೆದುಕೊಳ್ಳಿ. ಚೆನ್ನಾಗಿ ಅದರ ಕಡ್ಡಿಗಳನ್ನು ಬಿಡಿಸಿಕೊಂಡು ಅದರ ಸೊಪ್ಪು ಮಾತ್ರ ತೆಗೆದುಕೊಳ್ಳಬೇಕು. 50 ಗ್ರಾಂ ಮೆಂತ್ಯ ತೆಗೆದುಕೊಳ್ಳಬೇಕು. 50 ಗ್ರಾಂ ನಷ್ಟು ನಾಟಿ ಈರುಳ್ಳಿ ತೆಗೆದುಕೊಳ್ಳಬೇಕು.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : ತಲೆಯಲ್ಲಿ ಹೇನು / ಸೀರು ನಿವಾರಣೆಗೆ ಮನೆಮದ್ದು..!

ಆಮೇಲೆ ಚಿಕ್ಕದಾಗಿ ಈರುಳ್ಳಿಗಳನ್ನು ಕಟ್ ಮಾಡಿಕೊಂಡು ಅರ್ಧ ಲೀಟರ್ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು. ಇವೆಲ್ಲವನ್ನೂ ಆ ಎಣ್ಣೆಯಲ್ಲಿ ಹಾಕಿ ಮಂದ ಉರಿಯಲ್ಲೇ ಕುದಿಸಬೇಕು.

ಹೆಚ್ಚಿಗೆ ಇರುವ ಉರಿಯಲ್ಲಿ ಕುದಿಸಿದಾಗ ಕೊಬ್ಬರಿ ಎಣ್ಣೆಯಲ್ಲಿರುವಂತಹ vitamins ಪೌಷ್ಟಿಕ ಅಂಶಗಳೆಲ್ಲ ಆವಿಯಾಗಿ ಹೊರಟು ಹೋಗುತ್ತದೆ. ಆದ್ದರಿಂದ ಸಣ್ಣ ಉರಿಯಲ್ಲಿ ಬಾಣಲೆಯನ್ನು ಇಟ್ಟು ಅದರಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದರಲ್ಲಿ ಕರಿಬೇವಿನ ಸೊಪ್ಪನ್ನು ಹಾಕಬೇಕು. ಮತ್ತು ಅದರ ಜೊತೆಗೆ ಅದರಲ್ಲಿ ಮೆಂತೆ ಮತ್ತು ಈರುಳ್ಳಿಯನ್ನು ಹಾಕಬೇಕು.

ಇವೆಲ್ಲವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಹಾಗೆ ಇಡಬೇಕು. ಒಂದು ಗಂಟೆಗಳವರೆಗೂ ಸಣ್ಣ ಉರಿಯಲ್ಲಿ ಇಟ್ಟು ಅದು ಚೆನ್ನಾಗಿ ಸೀದು ಹೋಗಿರುತ್ತದೆ. ಅಂದರೆ ಕರಿಬೇವು ಸೊಪ್ಪು ಕಂದು ಬಣ್ಣ ಬರುವವರೆಗೂ ಬಿಡಬೇಕು.

ಅದು ಅರ್ಧ ಗಂಟೆಯಾದರೂ ಆಗಲಿ ಅಥವಾ ಮುಕ್ಕಾಲು ಗಂಟೆಯಾದರೂ ಆಗಲಿ ಅದು ಕಂದು ಬಣ್ಣದಲ್ಲಿ ಕರಿಬೇವಿನ ಸೊಪ್ಪು ಸಿದು ಹೋಗುವವರೆಗೂ ಬಿಡಬೇಕು. ಆಮೇಲೆ ಅದನ್ನು ಕೆಳಗೆ ಇಳಿಸಿ ತಣ್ಣಗೆ ಆದಮೇಲೆ ಸೋಷಿಕೊಳ್ಳಬೇಕು.

ಅಥವಾ ಅದನ್ನು ಶೋಧಿಸದೆ ಹಾಗೆ ಒಂದು ಡಬ್ಬಿಯಲ್ಲಿ ಹಾಕಿ ಬರಿ ಎಣ್ಣೆ ಮಾತ್ರ ತೆಗೆದುಕೊಂಡು ತಲೆಗೆ ಹಚ್ಚಿಕೊಳ್ಳುವುದರಿಂದ ಹೆಣ್ಣು ಮಕ್ಕಳಿಗಾಗಲಿ, ಅಥವಾ ಗಂಡು ಮಕ್ಕಳಿಗಾಗಲಿ, ಕೂದಲು ಉದುರುವ ಸಮಸ್ಯೆ ಅಥವಾ ತಲೆ ಹೊಟ್ಟಿನ ಸಮಸ್ಯೆ, ಕೆಲವೊಬ್ಬರಿಗೆ ತಲೆಯಲ್ಲಿ ಹೊಟ್ಟು ಹೊಟ್ಟು ಎದ್ದೇಳುತ್ತದೆ.

ಅಂತಹ ಸಮಸ್ಯೆ ಇರುವವರು ಕೂಡ ಈ ಎಣ್ಣೆಯನ್ನು ಉಪಯೋಗ ಮಾಡಬಹುದು. ಕೆಲವೊಬ್ಬರಿಗೆ ಪಿತ್ತ ಹೆಚ್ಚಿಗೆ ಆಗಿ ತಲೆ ಸುತ್ತು ಬರುತ್ತದೆ. ಇಂತಹ ಎಲ್ಲ ಸಮಸ್ಯೆಗಳು ಇರುವವರು ಕೂಡ ಈ ಎಣ್ಣೆಯನ್ನು ಬಳಸುತ್ತಾ ಬರುವುದರಿಂದ ನಿಮ್ಮ ಸಮಸ್ಯೆಗಳನ್ನು ಇದು ದೂರ ಮಾಡುತ್ತಾ ಬರುತ್ತದೆ.

ಆಸ್ಪತ್ರೆಗೆ ಮೆಡಿಕಲ್ ಶಾಪ್ ಗೆ ಅಥವಾ ಅಲ್ಲಿ ಇಲ್ಲಿ ಹೋಗುವ ಅವಶ್ಯಕತೆ ಇಲ್ಲದೆ ಈ ಮನೆ ಮದ್ದನ್ನು ನೀವು ನಿಮಗೆ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಬಹುದು.

Share Button

Share

Comments

No comments yet.