ಇಂದಿನ ಸಂಚಿಕೆಯಲ್ಲಿ, ಗಂಟಲು ನೋವಿಗೆ ಪರಿಹಾರ / ಗಂಟಲು ನೋವಿಗೆ ಬೆಸ್ಟ್ ಮನೆಮದ್ದು ಮಾಹಿತಿಯನ್ನು ನೋಡೋಣ.
ಗಂಟಲು ನೋವಿಗೆ ಬೆಸ್ಟ್ ಮನೆಮದ್ದು / ಕಾರಣಗಳು
ಈ ಗಂಟಲು Gantalu Novu ಸಮಸ್ಯೆ ನಮಗೆ ಸುಮಾರು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಟೌನ್ಸಿಲ್ ಸಮಸ್ಯೆ ಆದರೂ ಕೂಡ ಗಂಟಲು ನೋವು ಬರುತ್ತದೆ, ಚಳಿಯಿಂದ ಜ್ವರ ಬಂದರೂ ಕೂಡ ಗಂಟಲು ನೋವು ಬರುತ್ತದೆ, ಯಾವುದೇ ಒಂದು ಗಂಟಲು ನೋವು ಸಮಸ್ಯೆ ಬರುವಂತಹ ಆಹಾರವನ್ನು ತಿಂದಾಗ ಅದು ಗಂಟಲಿನಲ್ಲಿ ಮೆದು ಇರುವಂತಹ ಜಾಗದಲ್ಲಿ ಹೋಗಿ ಸುಟ್ಟು ಗಂಟಲು ನೋವು ಬರುತ್ತದೆ.
ಅಥವಾ ಅಸ್ತಮಾ ಸಮಸ್ಯೆಯಿಂದ ಕೂಡ ಗಂಟಲು ನೋವು ಬರುತ್ತದೆ ಧೂಳಿನಿಂದ ಬರುವಂತಹ ಅಲರ್ಜಿ, ಅಲರ್ಜಿ ಇಂದ ಕೂಡ ಗಂಟಲು ನೋವು ಬರುತ್ತದೆ. ವೈರಲ್ ಇನ್ಫೆಕ್ಷನ್ ನಿಂದ ಕೂಡ ಗಂಟಲು ನೋವು ಬರುತ್ತದೆ. ಹಾಗೆ ಯಾವುದೇ ರೀತಿಯ ಕಿವಿಯ ಇನ್ಫೆಕ್ಷನ್ ಅಥವಾ ಮೂಗಿನ ಇನ್ಫೆಕ್ಷನ್ ನಿಂದ ಗಂಟಲು ನೋವು ಬರುತ್ತದೆ.
ಕಿವಿಯಲ್ಲಿರುವ ಇನ್ಫೆಕ್ಷನ್ ಗಂಟಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ? ಕಿವಿ ಕಣ್ಣು ಮೂಗು ಇವೆಲ್ಲಾ ಒಂದಾನೊಂದು ಕನೆಕ್ಷನ್ ಇರುವಂತಹ ಭಾಗ ಇರುವುದರಿಂದ ಗಂಟಲು ನೋವು ಬರುತ್ತದೆ.
ಆಮೇಲೆ ತುಂಬಾ ತಂಪಾಗಿರುವ ಪದಾರ್ಥವನ್ನು ತಿನ್ನುವುದರಿಂದ ತಂಪಿನ ಅಂಶ ಗಂಟಲಿನಲ್ಲಿ ಇನ್ಫೆಕ್ಷನ್ ಆಗಿ, ಗಂಟಲು ನೋವು ಬರುತ್ತದೆ. ಚಳಿಗಾಲದಲ್ಲಿ ಕೂಡ ಬೇರೆ ಬೇರೆ ವಿಧಾನಗಳಿಂದ ಗಂಟಲು ನೋವು ಬರುತ್ತದೆ.
ಗಂಟಲು ನೋವಿಗೆ ಬೆಸ್ಟ್ ಮನೆಮದ್ದು
ನಾವು ಮೊದಲು ಯಾವ ಕಾರಣದಿಂದ ಗಂಟಲು ನೋವು ಬಂದಿದೆ ಎಂದು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ನಾವು ಚಳಿಗಾಲದಲ್ಲಿ ತಂಪಾಗಿರುವ ಪದಾರ್ಥವನ್ನು ತಿಂದು ಬಂದರೆ, ಬಿಸಿ ನೀರಿಗೆ ಅರಿಶಿನ ಮತ್ತು ಉಪ್ಪು ಹಾಕಿ ಗಾರ್ಗಲ್ ಮಾಡಿದರೆ, ಎರಡು ದಿವಸಗಳಲ್ಲಿ ತಕ್ಷಣವೇ ಗಂಟಲು ನೋವು ಕಡಿಮೆಯಾಗುತ್ತದೆ.
ಅಥವಾ ಬಿಸಿ ಹವೆಯನ್ನು ಮೂಗಿನ ಮೂಲಕ ತೆಗೆದುಕೊಂಡರೆ, ಗಂಟಲು ನೋವು ಕಡಿಮೆಯಾಗುತ್ತದೆ. ಅಥವಾ ನೀಲಗಿರಿ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ, ಆ ವೇಪರ್ ಅನ್ನು ಮೂಗಿನಿಂದ ಒಳಗೆ ಎಳೆದುಕೊಂಡರೆ, ಗಂಟಲು ನೋವು ಕಡಿಮೆಯಾಗುತ್ತದೆ.
ಅಥವಾ ಅರಿಶಿನದ ಹಿಟ್ಟನ್ನು ಹಾಲಿನಲ್ಲಿ ಹಾಕಿ ಕಾಯಿಸಿ ಬೆಲ್ಲವನ್ನು ಹಾಕಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಹೀಗೆ ಈ ಗಂಟಲು ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇನ್ನೂ ಹಲವಾರು ರೀತಿಯ ವಿಧಾನಗಳಿವೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : https://healthtipskannada.com/how-to-relieve-calf-muscle-pain-instantly/
ಇವುಗಳಿಂದ ಗಂಟಲು ನೋವು Gantalu Novu ಕಡಿಮೆ ಆಗದೆ ಇದ್ದರೆ, ತ್ರಿ ಕಟ್ಟು ಚೂರ್ಣವನ್ನು ಸೇವನೆ ಮಾಡುವುದರಿಂದ ಕೂಡ ಗಂಟಲು ನೋವು ಕಡಿಮೆಯಾಗುತ್ತದೆ. ಮತ್ತು ಶುಂಠಿ ಕಷಾಯಗಳಿಂದ ಗಂಟಲು ನೋವು ನಿವಾರಣೆ ಆಗುತ್ತದೆ. ಹೀಗೆ ಬೇರೆ ಬೇರೆ ಅವರ ಪ್ರಕೃತಿಗೆ ತಕ್ಕಹಾಗೆ, ನಿಮ್ಮ ಫ್ಯಾಮಿಲಿ ಡಾಕ್ಟರ್ಸ್ ಅನ್ನು ಸಂಪರ್ಕಿಸಿ, ಯಾವ ಮನೆ ಮದ್ದು ಮಾಡುವುದರಿಂದ ಹೇಗೆ ಅನುಕೂಲವಾಗುತ್ತದೆ? ಎಂದು ತಿಳಿದುಕೊಂಡು ನೀವು ಗಂಟಲು ನೋವಿನಿಂದ ಮುಕ್ತರಾಗಬಹುದು.
ಕೆಲವು ಸಂದರ್ಭಗಳಲ್ಲಿ ಗಂಟಲು ಬೇನೆಯಿಂದ ಸಂದು ವಾತಕ್ಕೆ ಕನ್ವರ್ಟ್ ಆಗುವಂತಹದ್ದನ್ನು ನಾವು ನೋಡಿದ್ದೇವೆ.
ರೋಮೋಟೈ ಡ್ ಅರ್ಥರೈಟಿ ಸಲ್ಲಿ ರಿಪೀಟೆಡ್ ಸೋರ್ ತ್ರೋಟ್ ಗಂಟಲು ಬೇನೆಯಿಂದ ಇನ್ಫೆಕ್ಷನ್ ಸ್ಪ್ರೆಡ್ ಆಗಿ, ಗಂಟುಗಳಲ್ಲಿ ಮನೆ ಮಾಡಿ, ನಮ್ಮ ದೇಹದಲ್ಲಿ ಗಂಟು ಗಂಟುಗಳಲ್ಲಿ ಸಂಧಿವಾತ ,ಆಮವಾತ, ಉಂಟು ಮಾಡುವಂತಹ ಲಕ್ಷಣಗಳು ಕಂಡುಬರುತ್ತವೆ.
ಆದ್ದರಿಂದ ( Throat Pain ) ಗಂಟಲು ನೋವಿನ ಸಮಸ್ಯೆ ಸಣ್ಣ ಪ್ರಮಾಣದಲ್ಲಿ ಇರುವಾಗಲೇ ಗಂಟಲು ನೋವಿನ ಚಿಕಿತ್ಸೆಯನ್ನು / ಗಂಟಲು ನೋವಿಗೆ ಬೆಸ್ಟ್ ಮನೆಮದ್ದು ಮಾಡಿಸಿಕೊಂಡರೆ, ಅದು ಮುಂದುವರೆದು ಬೇರೆ ಬೇರೆ ಕಾಯಿಲೆಗಳಾಗಿ ಕನ್ವರ್ಟ್ ಆಗುವುದನ್ನು ನಾವು ತಪ್ಪಿಸಬಹುದು.
ಹಾಗಾಗಿ ಈ ಗಂಟಲು ನೋವಿಗೆ ಬೆಸ್ಟ್ ಮನೆಮದ್ದು / ಗಂಟಲು ನೋವು ಸಣ್ಣದು ಎಂದು ಯಾರು ನಿರ್ಲಕ್ಷಿಸದೆ ಅದರ ಬಗ್ಗೆ ಸರಿಯಾಗಿ ಗಮನಿಸಿ, ಸರಿಯಾದ ಚಿಕಿತ್ಸೆಯನ್ನು ಮಾಡಿಸಿಕೊಂಡರೆ ಇಂತಹ ಗಂಟಲು ನೋವಿನಿಂದ ಬರುವಂತಹ ಕಾಯಿಲೆಗಳಿಂದ ನಾವು ಪಾರಾಗಬಹುದು.
ಒಮ್ಮೆ ನೀವು ನಿಮ್ಮ ಹತ್ತಿರದ ಆಯುರ್ವೇದ ತಜ್ಞ ವೈದ್ಯರ ಭೇಟಿ ಮಾಡಿ ಅವರ ಸೂಕ್ತ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
So ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ WhatsApp,Facebook,Instagram ಅಲ್ಲಿ ಅವರಿಗೂ ಕೂಡ ಈ ವಿಡಿಯೋವನ್ನು ಶೇರ್ ಮಾಡಿ.
ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು
Comments
No comments yet.